Widgets Magazine

ಮನೆಯಲ್ಲಿ ಮಲಗಿದ್ದವಳನ್ನು ಹೊಲಕ್ಕೆ ಎತ್ತಾಕಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ

ಹೈದರಾಬಾದ್| Jagadeesh| Last Modified ಸೋಮವಾರ, 27 ಜನವರಿ 2020 (14:35 IST)
ಆ ಮಹಿಳೆ ತನ್ನ ಮನೆಯಲ್ಲಿ ಎಂದಿನಂತೆ ಮಲಗಿದ್ದಳು. ಗಂಡ ಹೊರಗೆ ಹೋಗಿದ್ದ. ಆದರೆ ಬಾಗಿಲು ಮದ್ಯರಾತ್ರಿ ಬಾಗಿಲು ಬಡಿದ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.


ಮನೆಯಲ್ಲಿದ್ದ ಮಹಿಳೆಯನ್ನು ಹೆದರಿಸಿ ಕಿಡ್ನಾಪ್ ಮಾಡಿ ಹೊಲವೊಂದಕ್ಕೆ ಕರೆದುಕೊಂಡು ಹೋದ ಜನರಲ್ಲಿ ಮೂವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಒಟ್ಟು ಏಳು ಜನ ಕಾಮುಕರು ಮಹಿಳೆಯ ಮೇಲೆ ಎರಗೋಕೆ ಸಿದ್ಧವಾಗಿದ್ದರು. ಅಷ್ಟರಲ್ಲಾಗಲೇ ಪೊಲೀಸ್ ಗಸ್ತು ವಾಹನದ ಸದ್ದು ಕೇಳಿ ಎಲ್ಲರೂ ಪರಾರಿಯಾಗಿದ್ದಾರೆ.  

ಮಹಿಳೆಯು ಮನೆಯಲ್ಲಿದ್ದಾಗ ಆಕೆಯ ಗಂಡ ಪಕ್ಕದಲ್ಲಿದ್ದ ಬೇರೆಯವರ ಮನೆಯಲ್ಲಿದ್ದನಂತೆ. ಪೀಡಿತೆ ಕೇಸ್ ದಾಖಲು ಮಾಡಿದ್ದು ಏಳು ಜನರ ವಿರುದ್ಧ ದೂರು ದಾಖಲಾಗಿದೆ.

ತೆಲಂಗಾಣದ ಖಮ್ಮಂ ಬಳಿಯ ಗ್ರಾಮವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಇದರಲ್ಲಿ ಇನ್ನಷ್ಟು ಓದಿ :