ಸಿಟಿನಲ್ಲಿ ಪಿಸ್ತೂಲ್ ಸ್ಮಗ್ಲರ್ ಬಂಧನ ಮಾಡಲಾಗಿದೆ. ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ಖರೀದಿಸಿ ನಗರದ ರೌಡಿಗಳಿಗೆ, ಕ್ರಿಮಿನಲ್ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಶಕೀಲ್ ಅಹ್ಮದ್ ಬಂಧಿತ ಆರೋಪಿ. 21 ವರ್ಷಕ್ಕೆ ಗನ್ ಡೀಲಿಂಗ್ಗೆ ಇಳಿದಿದ್ದ ಆರೋಪಿ, ಹಲವು ಬಾರಿ ಜೈಲು ಸೇರಿದ್ರು ಕೃತ್ಯ ಬಿಟ್ಟಿರಲಿಲ್ಲ. 2019ರಲ್ಲಿ ಸಿಸಿಬಿ ಅಧಿಕಾರಿಗಳು ಶಕೀಲ್ ಅಹ್ಮದ್ನನ್ನ ಬಂಧಿಸಿದ್ದರು. 2016 ರಲ್ಲಿ ಸಂಪಿಗೆಹಳ್ಳಿ ಪೊಲೀಸರು ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿಲಾಗಿತ್ತು. ಬಳಿಕ ಮತ್ತೆ ಗನ್ ಡೀಲ್ಗೆ ಆರೋಪಿ ಇಳಿದಿದ್ದ.