ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಮ್ಮುಕೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎನ್.ಸಿ.ಸಿ, ಮತ್ತು ಭಾರತೀಯ ಸೇನಾಪಡೆ ಹಾಗೂ ವಾಯುಪಡೆಯ ಯುವ ಸೇನಾನಿಗಳ ಸಹಯೋಗದೊಂದಿಗೆ RBANMS ಕಾಲೇಜು ಮತ್ತು ವಿವಿಧ ಸರಕಾರಿ ಶಾಲೆ ಕಾಲೇಜುಗಳ ಆವರಣಗಳಲ್ಲಿ ಸಾವಿರ ಹಣ್ಣಿನ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಯುಪಡೆಯ ಕಮಾಂಡರ್ B.S.ಕನ್ವರ್ ಹಾಗೂ ಕರ್ನಾಟಕ ರಾಜ್ಯದ FICCI ಯ ಮುಖ್ಯಸ್ಥರಾದ ಶಾಜು ಮಂಗಳಂ ಮತ್ತು ಅಮ್ಮುಕೇರ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಅರ್ಪನಾ ನಜ್ರೆ ರವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.