ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯದಂತೆ ಭಾರತ ದೇಶವನ್ನು ಪ್ಲಾಸ್ಟಿಕ್ ಮುಕ್ತ ದೇಶ ಮಾಡಬೇಕು.ಈ ಮೂಲಕ ಮುಂದಿನ ಪೀಳಿಗೆ ಸ್ವಚ್ಛ ಪರಿಸರವನ್ನು ಕೊಡುಗೆಯಾಗಿ ನೀಡಲು ಪ್ರತಿಯೊಬ್ಬರು ಸಂಕಲ್ಪ ಮಾಡೋಣ. ಹೀಗಂತ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಹೇಳಿದ್ದಾರೆ.ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು. ಪಾಲಿಕೆಯಿಂದ ಆಯೋಜಿಸಲಾದ ಸಾರ್ವಜನಿಕ ಉದ್ಯಾನವನ ಸ್ವಚ್ಛತೆಯ ಶ್ರಮದಾನಕ್ಕೆ ಚಾಲನೆ ನೀಡಿ