ಬೆಂಗಳೂರು: ನಟ ಪ್ರಕಾಶ್ ರೈ ಮತ್ತೊಮ್ಮೆ ನೇರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಈ ಇಬ್ಬರೂ ಧುರೀಣರೂ ನಿಜವಾದ ಹಿಂದೂಗಳಲ್ಲ ಎಂದು ಅವರು ಕಿಡಿಕಾರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರೈ ಕೊಲೆಗಳನ್ನು ಬೆಂಬಲಿಸುವವರು, ಕೊಲೆಗಳ ಬಗ್ಗೆ ಮೌನ ವಹಿಸುವವರು ನಿಜವಾದ ಹಿಂದೂಗಳಲ್ಲ ಎಂದಿದ್ದಾರೆ.ಅವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ಮೋದಿ ವಿರೋಧಿ, ಶಾ ವಿರೋಧಿ, ಅನಂತಕುಮಾರ್ ಹೆಗ್ಡೆ