ರಾಯಚೂರು: ರಾಜಕಾರಣಿಗಳ ಮೇಲೂ ಹುಚ್ಚು ಪ್ರೀತಿ ತೋರುವ ಅಭಿಮಾನ ತೋರುವವರಿಗೇನೂ ಕಮ್ಮಿಯಿಲ್ಲ. ಪ್ರಧಾನಿ ಮೋದಿಯೂ ಇದಕ್ಕೆ ಹೊರತಲ್ಲ.ರಾಯಚೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿರಬೇಕಾದರೆ ಅಂಗಿ ಬಿಚ್ಚಿ ಟ್ಯಾಟೂ ಪ್ರದರ್ಶಿಸಿದ ಅಭಿಮಾನಿಯೊಬ್ಬ ಪ್ರಧಾನಿ ಮೋದಿ ಗಮನ ಸೆಳೆದರು. ಉರಿ ಬಿಸಿಲಿಗೆ ತಮ್ಮ ಬೆನ್ನ ಮೇಲೆ ಪ್ರಧಾನಿ ಮೋದಿ ಮುಖಚಿತ್ರವಿರುವ ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ಮೋದಿ ಗಮನ ಸೆಳೆಯಲು ಪ್ರಯತ್ನಪಡುತ್ತಿದ್ದ. ಇದು ಮೋದಿ ಕಣ್ಣಿಗೆ ಬಿತ್ತು.ಸಹೋದರ ನಿಮ್ಮ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ.