ಬೆಂಗಳೂರು: ರಾಜ್ಯಕ್ಕೆ ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ನಿನ್ನೆ ಧರ್ಮಸ್ಥಳ ದೇವರ ದರ್ಶನ ಪಡೆದು, ನಂತರ ಬೆಂಗಳೂರಿನಲ್ಲಿ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲೂ ರಾಜಕೀಯ ಬೆರೆಸಲಿಲ್ಲ. ಆದರೆ ಬೀದರ್ ನಲ್ಲಿ ರೈಲ್ವೇ ಹಳಿ ಉದ್ಘಾಟಿಸಿದ ನಂತರ ದೆಹಲಿ ವಿಮಾನವೇರುವ ಮುನ್ನ ಕಾಂಗ್ರೆಸ್ ಗೆ ಟಾಂಗ್ ಕೊಟ್ಟು ತೆರಳಿದರು. ಕೇಂದ್ರ ಸರ್ಕಾರ ಭ್ರಷ್ಟಾಚಾರ ವಿರೋಧಿ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಬುದ್ಧಿಗೇಡಿಗಳಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.ಗುಜರಾತ್ ನ ಪ್ರವಾಹದಿಂದ