ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಸಂಸತ್ ಭವನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಂಸತ್ತು ಎನ್ನುವುದು ಪವಿತ್ರ ಸ್ಥಳ. ಯಾವುದೇ ವಿಷಯವನ್ನು ಚರ್ಚಿಸೋಣ, ಇಲ್ಲಿ ಅತ್ಯುತ್ತಮ ವಿಚಾರಗಳು ಚರ್ಚೆಯಾಗಬೇಕು. ಚರ್ಚೆಗಳಲ್ಲಿ ವಿರೋಧ ಪಕ್ಷಗಳು ಸಹ ಸಕ್ರಿಯವಾಗಿ ಭಾಗಿಯಾಗಬೇಕು. ಅರ್ಥಪೂರ್ಣ ಸಂವಾದ ನಡೆಸೋಣ. ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನಾವೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ. ದೇಶಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಸಂಸತ್ತಿನ ಹಿರಿಮೆ