ಗದಗ: ಮಹದಾಯಿ ವಿಚಾರವಾಗಿ ಹೋರಾಟಗಾರರು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಬೆನ್ನಲ್ಲೇ ಅವರೇ ವಿವಾದದ ಬಗ್ಗೆ ಮಾತನಾಡಿದ್ದಾರೆ.ಗದಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಹದಾಯಿ ವಿವಾದ ಇಷ್ಟೊಂದು ಬೆಳೆಯಲು ಕಾಂಗ್ರೆಸ್ ಸರ್ಕಾರಗಳೇ ಕಾರಣ ಎಂದು ದೂರಿದ್ದಾರೆ.ಮೂರು ದಶಕಗಳಿಂದ ಈ ಸಮಸ್ಯೆಯನ್ನು ಇಷ್ಟೊಂದು ಎಳೆಯಲು ಬಿಟ್ಟಿದ್ದು ಕಾಂಗ್ರೆಸ್. ಮಹದಾಯಿ ವಿವಾದ ಆರಂಭವಾದಾಗ ಕೇಂದ್ರದಲ್ಲಿ, ಗೋವಾದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಅವರೇ ಇದನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್