ಚಿಕ್ಕೋಡಿ: ಮುಂಬರುವ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ ಚಿಕ್ಕೋಡಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.ಪ್ರಧಾನಿ ಭಾಷಣದಲ್ಲಿ ಕುಕ್ಕರ್ ವಿಷಯ ಪ್ರಸ್ತಾಪವಾಯಿತು. ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮತದಾರರಿಗೆ ಆಮಿಷವೊಡ್ಡಲು ಕುಕ್ಕರ್ ವಿತರಿಸಿದ್ದನ್ನು ಪ್ರಧಾನಿ ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿ ಟಾಂಗ್ ಕೊಟ್ಟರು.ಒಬ್ಬರ ಮೇಲೆ ರೈಡ್ ನಡೆಯುತ್ತದೆ. ಆಗ ಕುಕ್ಕರ್ ಜತೆಗೆ ಒಬ್ಬರ ಭಾವಚಿತ್ರವೂ ಸಿಗುತ್ತದೆ. ಇದೇನು ಭ್ರಷ್ಟಾಚಾರವಲ್ಲವೇ? ಎಂದು ಮೋದಿ ಲೇವಡಿ ಮಾಡಿದ್ದಾರೆ.ತಾಜಾ