ನವದೆಹಲಿ: 2019 ರ ಚುನಾವಣೆಯಲ್ಲಿ ತಾವು ಪ್ರಧಾನಿಯಾಗುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.ರಾಹುಲ್ ಗಾಂಧಿಗೆ ಪ್ರಧಾನಿ ಕುರ್ಚಿ ಮೇಲೆ ಕಣ್ಣು ಬಿದ್ದಿದೆ. ಅವರ ಕನಸು ಅದೊಂದೇ. ಒಬ್ಬ ವ್ಯಕ್ತಿ ತನ್ನಷ್ಟಕ್ಕೇ ತಾನೇ ಮುಂದಿನ ಪ್ರಧಾನಿಯಾಗುತ್ತೇನೆ ಎಂದುಕೊಳ್ಳಲು ಹೇಗೆ ಸಾಧ್ಯ? ಇದು ಅವರ ದರ್ಪ ಎಷ್ಟಿದೆ ಎಂದು ತೋರಿಸುತ್ತದೆ ಎಂದು ಮೋದಿ ಬಿಜೆಪಿ ಸಮಾವೇಶದಲ್ಲಿ ವ್ಯಂಗ್ಯವಾಡಿದ್ದಾರೆ.ರಾಹುಲ್ ಮುಂಬರುವ ಲೋಕಸಭೆಯಲ್ಲಿ ತಮ್ಮ ಪಕ್ಷ ಗೆದ್ದರೆ ಪ್ರಧಾನಿಯಾಗುವುದಾಗಿ