ಮಂಗಳೂರು : ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪಂದ್ಯಕಟ್ಟಿ ವಿದ್ಯಾರ್ಥಿನಿಯರಿಗೆ ಚುಂಬಿಸಿದ ವೀಡಿಯೋ ವೈರಲ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.8 ವಿದ್ಯಾರ್ಥಿಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ. ಬಾವುಟಗುಡ್ಡೆಯ ರೂಂನಲ್ಲಿ ವಿದ್ಯಾರ್ಥಿನಿಯರ ಜೊತೆ ಕಿಸ್ಸಿಂಗ್ ಪಂದ್ಯ ಮಾಡಿದ್ದ ವಿದ್ಯಾರ್ಥಿಗಳು, ಕಿಸ್ ನೀಡುವ ವೀಡಿಯೋವನ್ನೆಷ್ಟೇ ಅಲ್ಲದೇ ದೈಹಿಕ ಸಂಪರ್ಕದ ವಿಡಿಯೋಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ ಎಂದು