ವಿಶ್ವಮಾನವ ಸಂದೇಶ ಸಾರಿದ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನ ಅಂಗವಾಗಿ ಗೂಗಲ್ ನಿಂದ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಸಾಹಿತ್ಯ ಸೃಷ್ಟಿಸುತ್ತಿರುವ ಕುವೆಂಪು ಚಿತ್ರವನ್ನು ಡೂಡಲ್ಗೆ ಬಳಸಿಕೊಳ್ಳಲಾಗಿದೆ. ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ.ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್