ಇಂದಿರಾ ಕ್ಯಾಂಟಿನ್‌‌ ನಲ್ಲಿ ತಯಾರಾಗುತ್ತಿದೆ ವಿಷಯುಕ್ತ ಆಹಾರ

ಬೆಂಗಳೂರು, ಸೋಮವಾರ, 18 ಮಾರ್ಚ್ 2019 (13:39 IST)

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟಿನ್‌‌ ನಲ್ಲಿ ತಯಾರಾಗುವ ಆಹಾರವು ವಿಷಯುಕ್ತವಾಗಿದೆ ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.


ಬಿಬಿಎಂಪಿ ಉಮೇಶ್ ಎಂಬುವವರು ಇಂದಿರಾ ಕ್ಯಾಂಟಿನ್‌ ನಲ್ಲಿ ತಯಾರು ಮಾಡುವ ಊಟ ತಿನ್ನಲು ಯೋಗ್ಯವಾಗಿಲ್ಲ , ಬೆಂಗಳೂರಿನಲ್ಲಿ ಸರಿ ಸುಮಾರು 16 ಸಾವಿರ ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟಿನ್ ಊಟವು ವಿಷಯುಕ್ತವಾಗಿದೆ ಎನ್ನುವ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಆಹಾರವನ್ನು ಖಾಸಗಿ ಹಾಗೂ ಸರಕಾರದ ಪರೀಕ್ಷಾ ಕೇಂದ್ರದಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಿದ ವೇಳೆಯಲ್ಲಿ ಇಂದಿರಾ ಕ್ಯಾಂಟಿನ್ ನಲ್ಲಿ ಪೌರ ಕಾರ್ಮಿಕರಿಗೆ ನೀಡುತ್ತಿರುವ ಊಟ ತಿನ್ನಲು ಯೋಗ್ಯವಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.


ಇನ್ನು ಈ ಆಹಾರವನ್ನು ಸೇವನೆ ಮಾಡಿದರೆ ವಾಂತಿ, ಭೇದಿಯಾಗುವುದು ಖಚಿತ ಒಂದು ವೇಳೆ ಇಂಥಹ ಆಹಾರವನ್ನು ತಿನ್ನುತ್ತ ಹೋದರೆ ಮನುಷ್ಯ ಸಾವನ್ನಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ. ಇದರಿಂದ ಇಂದಿರಾ ಕ್ಯಾಂಟಿನ್‌ ನಲ್ಲಿ ಊಟ ಮಾಡುವವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎರಡು ಗ್ರಾಮಗಳ ನಡುವೆ ತಂದಿಟ್ಟು ತಮಾಷೆ ನೋಡ್ತಿರೋ ಅಧ್ಯಕ್ಷ?

ಅಣ್ಣ ತಮ್ಮಂದಿರಂತೆ ಇರುವ ಎರಡು ಗ್ರಾಮಗಳ ನಡುವೆ ಅಧ್ಯಕ್ಷನೊಬ್ಬ ಹುಳಿಹಿಂಡಿ ತಮಾಷೆ ನೋಡ್ತಿದ್ದು, ಆತನ ...

news

ತುಮಕೂರು ನಮಗೇ ಇರಲಿ ಎಂದ ಪರಂ

ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಜೆಡಿಎಸ್ ಗೆ ಬಿಟ್ಟು ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ...

news

ಹೆಚ್ಡಿಡಿ ಹಾಸನದಿಂದಲೇ ಸ್ಪರ್ಧಿಸಲಿ ಎಂದ ರೇವಣ್ಣ

ಮಹತ್ವದ ಬೆಳವಣಿಗೆಯೊಂದರಲ್ಲಿ ಹಾಸನದಿಂದ ದೇವೇಗೌಡ್ರೇ ಸ್ಪರ್ಧೆ ಮಾಡಬೇಕೆಂದು ಸಚಿವ ರೇವಣ್ಣ ...

news

ಇಂದು ಸಂಜೆ 5 ಗಂಟೆಗೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ

ಗೋವಾ : ಭಾನುವಾರ ನಿಧನರಾದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆಗೆ ...