ಚಂದ್ರನ ಕಾಣದ ಭಾಗ ದಕ್ಷಿಣ ಭಾಗದಲ್ಲಿ ಉಪಗ್ರಹ ಇಳಿಸುವಲ್ಲಿ ಯಶಸ್ವಿಯಾದ ಇಸ್ರೋ ವಿಜ್ಞಾನಿಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ರು. ಬೆಳಗ್ಗೆ ಆರು ಗಂಟೆ ಸುಮಾರಿಗೆ ಹೆಚ್ಎಎಲ್ ಏರ್ಪೋರ್ಟ್ ಗೆ ಬಂದಿಳಿದ ಮೋದಿ ಇಸ್ರೋ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರಳಿದ್ರು, ಕಾರ್ಯಕ್ರಮ ಮುಗಿಸಿ ದೆಹಲಿಗೆ ಪ್ರಯಾಣ ಬೆಳೆಸಿದ್ರು. ಚಂದ್ರನ ಡಾರ್ಕ್ ಪ್ಲೇಸ್ ಆದ ದಕ್ಷಿಣ ಭಾಗದಲ್ಲಿ ಪ್ರಜ್ಞಾನ್ ಉಪಗ್ರಹ ಸೇಫ್ ಲ್ಯಾಂಡ್ ಮಾಡುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.