ಬೆಂಗಳೂರು: ಕೊರೋನಾ ರೋಗಿಗಳನ್ನು ಶುಶ್ರೂಷೆ ಮಾಡುವ ಆಸ್ಪತ್ರೆಗಳಲ್ಲಿ ಒಂದಾಗಿರುವ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋ ಹರಿಯಬಿಟ್ಟ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ನಕಲಿ ವಿಡಿಯೋ ಹರಿಯಿಬಿಟ್ಟ ಈತನಿಂದಾಗಿ ಜನ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುವಂತಾಗಿತ್ತು. ಬಂಧಿತನನ್ನು ಸಮೀರವುಲ್ಲಾ ಎಂದು ಗುರುತಿಸಲಾಗಿದೆ.ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದ. ಆ ನಕಲಿ ವಿಡಿಯೋ ವೈರಲ್