ಕಳ್ಳತನ ಮಾಡಿದ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಸಾರ್ವಜನಿಕರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನ ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.ಮಾರಿಮುತ್ತು, ಸೈಯ್ಯದ್ ಶುಹೇಬ್ ಹಾಗೂ ಭರತ್ ಬಂಧಿತರು. ಡಿಸೆಂಬರ್ 28ರಂದು ಸಂಜೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಿಳೇಕಹಳ್ಳಿ ಬಳಿ ಸುಜಿತ್ ಎಂಬಾತನ ಕೈಯಲ್ಲಿದ್ದ ಐಪೋನ್ ಎಗರಿಸಿ ಪರಾರಿಯಾಗಿದ್ದರು. ಫೋನ್ ಕಳೆದುಕೊಂಡ ಸುಜಿತ್ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು.