ಖತರ್ನಾಕ್ ಕಳ್ಳನೊಬ್ಬನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧನ ಮಾಡಿದ್ದಾರೆ. ಆಟೋ ರಿಕ್ಷಾ ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಹಳೇಹುಬ್ಬಳ್ಳಿ ಕೃಷ್ಣನಗರದ ನಿವಾಸಿ ಅರುಣ ರಾಜು ನಾಯ್ಕ (19) ಬಂಧಿತ ಆರೋಪಿ. ಈತ ಕಮರಿಪೇಟೆಯ ದಿವಟೆ ಓಣಿಯಲ್ಲಿ ನಿಲ್ಲಿಸಿದ್ದ ಆಟೋವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಅರುಣ ಶಿವಲಿಂಗಪ್ಪ ಹಚಡದ ಎಂಬುವರು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು.ದೂರು