ಯಲಹಂಕ ನಗರದ ಎನ್ಇಎಸ್ ಸರ್ಕಲ್ ಬಳಿ ಟೀ ಅಂಗಡಿಯಿಟ್ಟು ವ್ಯಾಪಾರ ಮಾಡುತ್ತಿದ್ದ ದಂಪತಿಗಳ ಮಾಮೂಲಿ ನೀಡಿಲ್ಲವೆಂಬ ಕಾರಣಕ್ಕೆ ಪೊಲೀಸರು ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಫುಟ್ಪಾತ್ನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ದಂಪತಿಗಳಾದ ರಾಜು ಮತ್ತು ಪತ್ನಿ ಅಂಬಿಕಾ ಮೇಲೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಹಲ್ಲೆ ನಡೆಸಿ, ಮಾಮೂಲಿ ಹಣ ನೀಡದಿದ್ದರೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದಂಪತಿಗಳು ತಿಳಿಸಿದ್ದಾರೆ. ಸ್ಥಳೀಯರು ಅಮಾಯಕ ದಂಪತಿಗಳ ಮೇಲೆ