ಮೈಸೂರು: ತುಂತುರು ಮಳೆಯಲ್ಲಿಯೇ ಪೊಲೀಸ್ ಬ್ಯಾಂಡ್ ವಾದನಕ್ಕೆ ಮೈಮರೆತು ನಿಂತ ಸಂಗೀತ ಪ್ರೇಮಿಗಳು ವರುಣನಿಗೆ ಸವಾಲು ಹಾಕಿ ಸುಶ್ರಾವ್ಯ ಸಂಗೀತ ಆಸ್ವಾದಿಸಿದರು. ಮೈಸೂರಿನ ಅರಮನೆ ಸಾಂಸ್ಕೃತಿಕ ವೇದಿಕೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಮೂಹ ವಾದ್ಯಮೇಳಕ್ಕೆ ವರುಣ ಸಹ ಸಾಥ್ ನೀಡಿದ್ದ. ಇಂಗ್ಲೀಷ್ ಬ್ಯಾಂಡ್ ಮಾಸ್ಟರ್ ಆಲ್ಫೆಡ್ ಸುರೇಂದ್ರಕುಮಾರ್ ನೇತೃತ್ವದಲ್ಲಿ ಅರಮನೆ ಗಜಲಕ್ಷ್ಮಿ ಗೇಟ್ನಿಂದ ರಾಯಲ್ ಫ್ಯಾನ್ಫೇರ್ ವಾದ್ಯ ನುಡಿಸುತ್ತ ನಿಧಾನವಾಗಿ ಅರಮನೆ ಆವರಣ ಪ್ರವೇಶಿಸಿದ, 21 ಪೊಲೀಸ್ ವಾದ್ಯಮೇಳದ ತಂಡಗಳು