ಕುಡಿದ ಅಮಲಿನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ- ಬೆಟಗೇರಿ ಸಹಸ್ರಾರ್ಜುನ ಸರ್ಕಲ್ ಬಳಿ ನಡೆದಿದೆ.ಗದಗ ಪೊಲೀಸರ ಫೈಟ್ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ. ಗದಗ ಮಹಿಳಾ ಠಾಣೆಯ ಸಿಬ್ಬಂದಿ ಶರಣಪ್ಪ ಬಸಾಪೂರ ಹಾಗೂ ಗದಗ ಗ್ರಾಮೀಣ ಠಾಣೆ ಸಿಬ್ಬಂದಿ ಮಂಜುನಾಥ ಬಾರಕೇರ್ ಎಂಬ ಪೊಲೀಸ್ ಸಿಬ್ಬಂದಿಗಳೇ ಕಿತ್ತಾಡಿಕೊಂಡ ಸಿಬ್ಬಂದಿಗಳಾಗಿದ್ದಾರೆ. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆ ಎನ್ನಲಾಗುತ್ತಿದೆ.ಈ ಇಬ್ಬರ ಪೊಲೀಸರ ಗಲಾಟೆ ಸಾರ್ವಜನಿಕರಿಗೆ