ಸ್ಥಳೀಯ ಚುನಾವಣೆ: ಪೊಲೀಸ್- ಅಭ್ಯರ್ಥಿಗಳ ಮಾತಿನ ಚಕಮಕಿ

ಚಿತ್ರದುರ್ಗ| Jagadeesh| Last Modified ಶನಿವಾರ, 18 ಆಗಸ್ಟ್ 2018 (19:06 IST)

ಕೋಟೆ ನಾಡಿನಲ್ಲಿ ನಗರ ಸಭಾ ಚುನಾವಣೆ ಕಾವು ರಂಗೇರುತ್ತಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸುವ ವೇಳೆ ಪೊಲೀಸರು ಮತ್ತು ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಚಿತ್ರದುರ್ಗ ನಗರದ ಬಾಲ ಭವನದಲ್ಲಿ ನಗರದ 37ನೇ ವಾರ್ಡನ ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸುವ ಸಂಧರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.

22ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು

ನಾಮಪತ್ರ ಸಲ್ಲಿಸಲು ಟೋಕನ್ ಪಡೆಯಲು ಹೋದಾಗ ಪೊಲೀಸ್ ಆಧಿಕಾರಿಗಳು ನಾಮಪತ್ರ ಸಲ್ಲಿಸುವವರಿಗೆ ಮಾತ್ರ ಒಳಗಡೆ ಬಿಡುವುಗಾಗಿ ಹೇಳಿದ್ದಾರೆ. ಆಗ ಗೊಂದಲದ ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ಪರಿಸ್ಥಿತಿ ತಿಳಿಗೊಂಡ ಕೆಲ ಸಮಯ ಬಳಿಕ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಂದುವರೆಯಿತು.

Police, candidates, speech flames,


ಇದರಲ್ಲಿ ಇನ್ನಷ್ಟು ಓದಿ :