ಬೆಂಗಳೂರು: ಮಕ್ಕಳಾಗಿಲ್ಲವೆಂದು ಪದೇ ಪದೇ ಎಲ್ಲರೂ ಪ್ರಶ್ನಿಸುತ್ತಿದ್ದರಿಂದ ಬೇಸತ್ತ ಪೊಲೀಸ್ ದಂಪತಿ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಸುರೇಶ್ ಮತ್ತು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಬಿ. ಶೀಲಾ ಮೃತ ದಂಪತಿ. ಗುರುವಾರ ರಾತ್ರಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ದಂಪತಿ ಈ ಕೃತ್ಯವೆಸಗಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗದ ಕಾರಣ ಮನೆಗೆ ಬಂದ ಸಹೋದ್ಯೋಗಿಗಳಿಗೆ ಇಬ್ಬರೂ ನೇಣಿಗೆ ಶರಣಾಗಿರುವುದು