ಬೆಂಗಳೂರು: ಕೊಲೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಸಿಗರೇಟ್ ಚಟ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಸಿಗರೇಟ್ ಕೊಡಿ ಎಂದು ರವಿ ಬೆಳಗೆರೆ ನಿನ್ನೆ ಪೊಲೀಸರ ಮೇಲೆ ಮೊಂಡು ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪೊಲೀಸರು ರವಿ ಬೆಳಗೆರೆಗೆ ಸಿಗರೇಟ್ ಸೇದಲು ಅವಕಾಶ ನೀಡಿದ್ದಾರೆಂಬ ಮಾಧ್ಯಮ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಿಗರೇಟ್ ನೀಡಲಿಲ್ಲ.ನಿನ್ನೆಯಿಂದ ಸಿಗರೇಟ್ ಸೇದಲು ಅವಕಾಶ ಕೊಟ್ಟಿಲ್ಲ.