ಉಡುಪಿ: ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಾವಿಯೊಳಗೆ ಕೆಲವು ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ.ಕೃಷ್ಣ ಮಠ ಮತ್ತು ಶೀರೂರು ಮಠದ ಬಳಿಯ ಬಾವಿಯಲ್ಲಿ ಶೋಧ ನಡೆಸಿದ ಪೊಲೀಸರಿಗೆ ಕೆಲವು ವಸ್ತುಗಳು ಸಿಕ್ಕಿದ್ದು, ಇದನ್ನು ತನಿಖೆಗಾಗಿ ಚೀಲದಲ್ಲಿ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ಬಾವಿಯೊಳಗೆ ಮದ್ಯದ ಬಾಟಲಿಗಳೂ ಸಿಕ್ಕಿವೆ ಎನ್ನಲಾಗಿದೆ.ಆದರೆ ತನಿಖೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ