ನನ್ನನ್ನು ಯಾವುದೇ ಕಳ್ಳತನದ ಕೇಸ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿಲ್ಲ. ನನಗೆ ಎರಡನೇ ಮದುವೆ ಕೂಡ ಆಗಿಲ್ಲ ಎಂದು ಪ್ರಸಿದ್ಧ ಚಿನ್ನದ ವ್ಯಾಪಾರಿ ಅಟ್ಟಿಕಾ ಗೋಲ್ಡ್ ಮಾಲೀಕರಾದ ಅಟ್ಟಿಕಾ ಬಾಬು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಅಣ್ಣನ ಮಗನನ್ನು ನಾನೇ ಸಾಕಿಕೊಂಡಿದ್ದೆ. ಅವನನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆ ಮಾಡಿಕೊಟ್ಟಿದ್ದೆ. ಹೆಂಡತಿ ಮನೆಯಲ್ಲಿ ವಾಸವಾಗಿದ್ದ, ಆದರೆ ಅವರ ಕುಟುಂಬದಲ್ಲಿ ಗಲಾಟೆ ಆಗಿದೆ.