ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆಹಚ್ಚಲು ಪೊಲೀಸರು ಶತಾಯಗತಾಯ ಯತ್ನಿಸುತ್ತಿದ್ದು, ಪ್ರಕರಣದ ಮರುಸೃಷ್ಟಿ ಮಾಡಿದ್ದಾರೆ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳು ಅಸ್ಪಷ್ಟವಾಗಿರುವ ಕಾರಣ, ಎಸ್ಐಟಿ ಅಧಿಕಾರಿಗಳು ಘಟನೆಯ ಮರುಸೃಷ್ಟಿ ಮಾಡಿ ಮತ್ತಷ್ಟು ಸುಳಿವು ಪಡೆಯುವ ಯತ್ನ ನಡೆಸಿದ್ದಾರೆ.ಈ ನಡುವೆ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾದಿ ನಾಯಕರು ಹಂತಕರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಟ ಚೇತನ್, ಗೌರಿ ಲಂಕೇಶ್ ಹತ್ಯೆ ಒಂದು ಭಯೋತ್ಪಾದಕ