ಬೆಂಗಳೂರು : ಹಲಸೂರಿನ ಸ್ಟಾರ್ ಹೋಟೆಲ್ನಲ್ಲಿ ನಡೆದ ರೇವ್ ಪಾರ್ಟಿಯ ಫಾರಿನ್ ಮಾಡೆಲ್ಗಳಿಗೆ ನೋಟಿಸ್ ಜಾರಿಯಾಗಿದೆ.ಕೆಲವರ ವೀಸಾ ಅವಧಿ ಮುಗಿದಿದ್ದರೆ, ಮತ್ತೆ ಕೆಲ ಮಾಡೆಲ್ಗಳ ವ್ಯವಹಾರದ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.ಹಲಸೂರಿನ ದಿ ಪಾರ್ಕ್ ಹೊಟೇಲ್ನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಕೇಸ್ನಲ್ಲಿ ದೊಡ್ಡ, ದೊಡ್ಡ ಮಾಡೆಲ್ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ಸ್ ಬಂದಿದ್ದಾದರೂ ಹೇಗೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದು ಕೂಡ ಪೊಲೀಸರಿಗೆ ತಲೆನೋವು ತಂದಿದೆ.