ಬೆಂಗಳೂರು : ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ನೀರು ಸರಬರಾಜು ವಾಹನಗಳ ಮೇಲೆ ದಾಳಿ ನಡೆಸಿದ ಸಂಚಾರಿ ಪೊಲೀಸರು ಬೃಹತ್ ಮೊತ್ತದ ದಂಡವನ್ನು ಸಂಗ್ರಹಿಸಿದ್ದಾರೆ. ಕಾರ್ಯಾಚರಣೆ ವೇಳೆ ನಿಮಯ ಉಲ್ಲಂಘಿಸಿದ 595 ವಾಹನಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬರೋಬ್ಬರಿ, 3,33,550 ರೂ. ದಂಡ ಕಲೆ ಹಾಕಿದ್ದಾರೆ. ಸೀಟ್ ಬೆಲ್ಟ್ ಧರಿಸದಿರುವುದು, ನೋ ಎಂಟ್ರಿಯಲ್ಲಿ ಸಂಚಾರ, ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ , ಪಾದಚಾರಿ