ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ರಾಜ್ಯದ್ಯಾಂತ ಸಂಚಲನ ಸೃಷ್ಟಿಸಿದೆ. ಉಗ್ರ ಶಾರೀಕ್ ನಕಲಿ ದಾಖಲೆ ನೀಡಿ, ಮನೆ ಬಾಡಿಗೆಗೆ ಪಡೆದಿದ್ದನು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ನಗರ ಪೊಲೀಸರು ನೂತನ ನಿಯಮ ಜಾರಿ ಮಾಡಿದ್ದಾರೆ. ಮನೆ ಮಾಲೀಕರು ಮನೆ ಬಾಡಿಗೆ ಕೊಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆಯಬೇಕು. ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಈ ಸೂಚನೆಯನ್ನು ನೀಡಿದ್ದಾರೆ. 100 ರೂಪಾಯಿ ಪಾವತಿಸಿ