ಬೆಂಗಳೂರು-ಮುಂದುವರೆದ ಭಾಗವಾಗಿ ಹಲಸೂರು ಹಾಗೂ ಬೈಯಪ್ಪನಹಳ್ಳಿ ಪೊಲೀಸರಿಂದ ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.ಖಾಸಗಿ ಹೋಟೆಲ್ಗಳಲ್ಲಿ ವಿದೇಶಿ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸ್ತಿದ್ರು.ವೇಶ್ಯಾವಾಟಿಕೆಗೆ ಕರೆತಂದಿದ್ದ ಐವರು ವಿದೇಶಿ ಮಹಿಳೆಯರ ರಕ್ಷಣೆ ಮಾಡಲಾಗಿದೆ.ರಕ್ಷಣೆ ಮಾಡಿದ ಮಹಿಳೆಯರನ್ನು FRRO ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿದೆ.ಬೆಂಗಳೂರು, ಜೈಪುರ, ಚೆನ್ನೈ, ಮೈಸೂರು, ದೆಹಲಿ, ಉದಯ್ ಪುರ, ಮುಂಬೈ ಮುಂತಾದ ಕಡೆಗಳಲ್ಲಿ ಏಜೆಂಟ್ ಗಳನ್ನು ಇಟ್ಟುಕೊಂಡಿದ್ದರು.ಏಜೆಂಟ್ ಗಳ ಮೂಲಕ ವಿದೇಶಿ ಮಹಿಳೆಯರಿಗೆ ಗಾಳ ಹಾಕ್ತಾ ಇದ್ದರು.