ಶೀಘ್ರದಲ್ಲಿಯೇ ಪೊಲೀಸರ ವೇತನದಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಗೃಹ ಸಚಿವ ಡಾಕ್ಟರ್ ಪರಮೇಶ್ವರ ನಾಯ್ಕ ಹೇಳಿದ್ದು ಪೊಲೀಸರು ಮತ್ತೆ ಪ್ರತಿಭಟನೆಯಲ್ಲಿ ತೊಡಗುವುದಿಲ್ಲವೆಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಇಂದು ನಗರಕ್ಕೆ ಆಗಮಿಸಿದ್ದ ಪರಮೇಶ್ವರ್ ಪತ್ನಿ ಸಮೇತ ಹಾಸನಾಂಬೆ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸರ ವೇತನದಲ್ಲಿ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದರು. ಔರಾದ್ಕರ್