ಬೆಂಗಳೂರು : ಕೈಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಓಡುತ್ತಿದ್ದ ಕಳ್ಳನೊಬ್ಬನನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಬೆನ್ನಟ್ಟಿ ಹಿಡಿದಿರುವ ಘಟನೆ ಫೆ. 14 ರಂದು ಅಶೋಕ್ ನಗರದ ಖಾಸಗಿ ಕಾಲೇಜಿನ ಬಳಿ ನಡೆದಿದೆ. ಆದರೆ ಸಿಕ್ಕಿಹಾಕಿಕೊಂಡ ಬಳಿಕ ಕಳ್ಳ ಹೇಳಿದ ಕಥೆಗ ಮನಕರಗಿ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ರಾಯಚೂರು ಮೂಲದ ಯುವಕನೊಬ್ಬ ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನಾಚರಣೆಯಂದು ಆಕೆಗೆ ಸರ್ ಪ್ರೈಸ್ ನೀಡಬೇಕೆಂಬ ಉದ್ದೇಶದಿಂದ