ಅತ್ಯಾಚಾರಕ್ಕೆ ಯತ್ನ ಆರೋಪ ಹೊತ್ತಿರುವ ರೌಡಿಶೀಟರ್ ಶಿವರಾಮರೆಡ್ಡಿ ಮೇಲೆ ಪೊಲೀಸರು ಎರಡು ಸುತ್ತಿನ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಮಾರತಹಳ್ಳಿಯಲ್ಲಿ ಶಿವರಾಮರೆಡ್ಡಿ ಇದ್ದಾನೆ ಎನ್ನುವ ಸುಳಿವು ಪಡೆದ ಪೊಲೀಸರು ಬಂಧಿಸಲು ಆಗಮಿಸುತ್ತಿದ್ದಂತೆ ಮಾರಕಾಸ್ತ್ರಗಳಿಂದ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಶಾ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಮಂಜುನಾಥ್ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ರೌಡಿಶೀಟರ್ ಕುಖ್ಯಾತಿಯನ್ನು ಹೊಂದಿರುವ ಶಿವರಾಮರೆಡ್ಡಿ