ಮನೆಯಲ್ಲೇ ಕೂರಲ್ವಾ? ಇನ್ನು ಹೊರಗೆ ತಿರುಗಾಡಿದರೆ ಲಾಠಿ ಏಟೇ ಗತಿ!

ಬೆಂಗಳೂರು| Krishnaveni K| Last Modified ಗುರುವಾರ, 26 ಮಾರ್ಚ್ 2020 (09:23 IST)
ಬೆಂಗಳೂರು: ಕೊರೋನಾವೈರಸ್ ತಡೆಯಲು ಸರ್ಕಾರ ಇಡೀ ದೇಶ ಮುಂದಿನ 21 ದಿನ ಲಾಕ್ ಡೌನ್ ಎಂದು ಘೋಷಿಸಿದರೂ ಜನರು ಮಾತ್ರ ಕೇಳುವ ಸ್ಥಿತಿಯಲ್ಲಿದೆ.


ಹೋಟೆಲ್ ಗೆ ಹೋಗುವ ನೆಪದಲ್ಲಿ ಮಾರುಕಟ್ಟೆಗೆ ತೆರಳುವ ನೆಪದಲ್ಲಿ ಹೊರಗಡೆ ಸುತ್ತಾಡುವ ಜನರಿಗೆ ಇನ್ನು ಪೊಲೀಸರ ಲಾಠಿ ಏಟೇ ಗತಿ. ದ.ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಈಗಾಗಲೇ ಈ ರೀತಿ ತಿರುಗಾಡುವವರಿಗೆ ಲಾಠಿ ರುಚಿ ತೋರಿಸಿದ್ದಾರೆ.
 
ಬೆಂಗಳೂರಿನಲ್ಲೂ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ರೀತಿ ಹೊರಗಡೆ ಅನವಶ್ಯಕವಾಗಿ ತಿರುಗಾಡುವವರನ್ನು ಕಂಡರೆ 100 ಸಂಖ್ಯೆಗೆ ಕರೆ ಮಾಡಿ. ತಕ್ಷಣವೇ ಪೊಲೀಸರು ಅವರನ್ನು ವಶಪಡಿಸುವ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಹೀಗಾಗಿ ನಿಮ್ಮ ಸುರಕ್ಷತೆಗಾಗಿಯಾದರೂ ಮನೆಯಲ್ಲೇ ಇದ್ದರೆ ಕ್ಷೇಮ.
ಇದರಲ್ಲಿ ಇನ್ನಷ್ಟು ಓದಿ :