ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಗೆ ಎಂಟ್ರಿ ಕೊಡ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ಸಿಟಿಗೆ ಆಗಮಿಸಲಿದ್ದು ಈ ಹಿನ್ನೆಲೆ ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್ರು ಬಂದೋಬಸ್ತ್ ಮಾಡಿಕೊಳ್ಳಲ್ಲಿದ್ದಾರೆ. ಹೆಚ್ ಎಎಲ್ ನಿಂದ ಪೀಣ್ಯದ ಇಸ್ರೋ ಕಚೇರಿವರೆಗೂ ಪೊಲೀಸ್ರು ಹದ್ದಿನಕಣ್ಣಿಡಲಿದ್ದಾರೆ. ಕಮಿಷನರ್ ಬಿ.ದಯಾನಂದ್ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತರಾದ ರಮನ್ ಗುಪ್ತಾ ಹಾಗೂ ಸತೀಶ್ ಕುಮಾರ್ ಸೇರಿ ಎಲ್ಲಾ ಡಿಸಿಪಿಗಳು ಮೇಲ್ವಿಚಾರಣೆ ವಹಿಸಲಿದ್ದಾರೆ. 50