ರಾಜಕೀಯ ಮುಖಂಡರೊಬ್ಬನ ಪುತ್ರನನ್ನು ನಡುರಸ್ತೆಯಲ್ಲೇ ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸುದರ್ಶನ ನಗರ ನಿವಾಸಿ, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ್ ಪೂಜಾರಿ ಅವರ ಪುತ್ರ ಕಾರ್ತಿಕ್ ರಾಜ್(27) ಸಾವಿನ ದವಡೆಯಿಂದ ಪಾರಾಗಿ ಬಂದವರಾಗಿದ್ದಾರೆ.ಇಂದು ಮುಂಜಾನೆ ಕಾರ್ತಿಕ್ ಎಂದಿನಂತೆ ವಾಯು ವಿಹಾರಕ್ಕೆ ತೆರಳಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳಿದ್ದರೂ ಪೊಲೀಸರು ಇದನ್ನು ಅಪಘಾತ