ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶನ ಮೂರ್ತಿ ಕಲಾವಿದರು ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಕಲಾವಿದರ ಬದುಕು ಇದೀಗ ಬೀದಿಗೆ ಬಂದಿದೆ.ಹಾವೇರಿ ಜಿಲ್ಲೆ ಕಲಾವಿದರ ತವರೂರು. ಆದರೆ ವರ್ಷವೀಡಿ ಮಣ್ಣಿನ ಮೂರ್ತಿ ತಯಾರಿಕೆ ಮಾಡುವ ಕಾಯಕದಲ್ಲಿ ತೊಡಗಿರುವ ಬಡ ಕಲಾವಿದರು ಮಾತ್ರ ಇದೀಗ ಸಂಕಷ್ಟದಲ್ಲಿದ್ದಾರೆ. ಯಾಕಂದ್ರೆ ಹಾವೇರಿಯಲ್ಲಿ ಪಿಓಪಿ ( ಪ್ಲಾಸ್ಟರ್ ಆಫ್ ಪ್ಯಾರಿಸ್) ನ ಗಣೇಶನ ಮೂರ್ತಿಯದ್ದೆ ಹಾವಳಿ. ಜಿಲ್ಲೆಯ ಕಲಾವಿದರ ಹೊಟ್ಟೆಯ ಮೇಲೆ ಹೊಡೆತ ಬೀಳುತ್ತಿರುವುದೇ ಪಿಓಪಿ