ರಾಜ್ಯ ಸರಕಾರದ ಪ್ರಭಾವಿ ರಾಜಕಾರಣಿಯೊಬ್ಬರು ಭ್ರಷ್ಟ ಅಧಿಕಾರಿ ಚಿಕ್ಕರಾಯಪ್ಪನಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಫಾರ್ಮ್ಹೌಸ್ನಲ್ಲಿ ಭ್ರಷ್ಟ ಅಧಕಾರಿ ಚಿಕ್ಕರಾಯಪ್ಪ ಆಶ್ರಯ ಪಡೆದಿದ್ದಾನೆ ಎಂದು ಶಂಕೆಗಳು ಉಂಟಾಗುತ್ತಿವೆ. ಈ ಕುರಿತು ಇಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಇಡಿ ಅಧಿಕಾರಿಗಳು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಬೃಹತ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿ ಚಿಕ್ಕರಾಯಪ್ಪ, ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾನೆ. ಇತನ ವಿರುದ್ಧ ಲುಕ್ಔಟ್ ನೋಟಿಸ್