ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಜ್ವಲ್ ದೇವರಾಜ್ ಸ್ಪಷ್ಟಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದ ತಮ್ಮ ಫೇಸ್ ಬುಕ್ ಖಾತೆಯಿಂದ ಲೈವ್ ನೀಡಿರುವ ಪ್ರಜ್ವಲ್, ಪ್ರಕರಣದಲ್ಲಿ ಮಾಧ್ಯಮಗಳು ನನ್ನ ಹೆಸರು ಸೇರಿಸಿದ್ದು ತಿಳಿದು ಬೇಸರವಾಯಿತು. ಸದ್ಯ ಗೋವಾದಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ಸಾಮಾಜಿಕ ಕಾಳಜಿ ಇರಬೇಕಾದ ಕೆಲ ವಾಹಿನಿಗಳು ನಮ್ಮ ಕುಟುಂಬದ ಹೆಸರಿಗೆ ಧಕ್ಕೆ ತಂದಿವೆ