ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ರನ್ನು ಕಣಕ್ಕಿಳಿಸಬೇಕೇ ಎನ್ನುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ಗೆ ಇನ್ನೂ ರಾಜಕೀಯದಲ್ಲಿ ಬೆಳೆಯಲು ಸಮಯಾವಕಾಶವಿದೆ. ಅವಸರವಾಗಿ ಚುನಾವಣೆಗೆ ಸ್ಪರ್ಧಿಸುವುದು ಸರಿಯಲ್ಲ. ಸೂಕ್ತ ಸಮಯದಲ್ಲಿ ದೇವೇಗೌಡರು ಮತ್ತು ಇತರ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ನಮ್ಮ ಮುಂದೆ ವಿಧಾನಸಭೆ ಚುನಾವಣೆಯಿದೆ. ಪ್ರಜ್ವಲ್, ನಿಖಿಲ್ ಸೇರಿದಂತೆ ಪ್ರತಿಯೊಬ್ಬರು ಚುನಾವಣೆಯ ಗೆಲುವಿಗಾಗಿ ಒಗ್ಗಟ್ಟಿನಿಂದ ಹೋರಾಟ