ಬೆಂಗಳೂರು: ತಾತ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ ಸೋತಿದ್ದಕ್ಕೆ ತಾವು ಗೆದ್ದ ಹಾಸನ ಕ್ಷೇತ್ರಕ್ಕೆ ರಾಜೀನಾಮೆ ಕೊಡಲು ಮುಂದಾದ ಪ್ರಜ್ವಲ್ ರೇವಣ್ಣಗೆ ಜನರ ಆಕ್ರೋಶದ ಬಿಸಿ ತಾಗಿದೆ.ತನಗಾಗಿ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದ ಗೌಡರು ಸೋತಿದ್ದಕ್ಕೆ ಪ್ರಜ್ವಲ್ ನಾನು ತಾತನಿಗಾಗಿ ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದರು. ಮತ್ತೆ ಹಾಸನದಿಂದ ದೇವೇಗೌಡರು ಸ್ಪರ್ಧಿಸಿ ಅವರನ್ನು ಸಂಸದರನ್ನಾಗಿ ಮಾಡಲು ಯೋಜನೆ ಹಾಕಿದ್ದರು. ಆದರೆ ಪ್ರಜ್ವಲ್ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಕ್ಕೆ ಅವರ