ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ತೊಡೆತಟ್ಟಿದ ಪ್ರಜ್ವಲ್ ರೇವಣ್ಣ, ಪಕ್ಷದಲ್ಲಿ ಸೂಟ್ಕೇಸ್ ಸಂಸ್ಕ್ರತಿಯಿದೆ ಎಂದು ವಾಗ್ದಾಳಿ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ನಮ್ಮ ಪಕ್ಷದಲ್ಲಿ ಒಂದು ರೋಗವಿದೆ. ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದವರಿಗೆ ಹಿಂದಿನ ಸೀಟ್ನಲ್ಲಿ ಸ್ಥಳ ದೊರೆಯುತ್ತದೆ. ಸೂಟ್ಕೇಸ್ನಲ್ಲಿ ಹಣ ತಂದವರಿಗೆ ಮಾತ್ರ ಮುಂದಿನ ಸೀಟ್ ದೊರೆಯುತ್ತದೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ದೇವೇಗೌಡರ ಮೊಮ್ಮಗ, ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ