ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಕಿಡಿ ಕಾರಿದ್ದಕ್ಕೆ ಸಚಿವರ ಆಪ್ತರೊಬ್ಬರು ದೂರು ದಾಖಲಿಸಿರುವ ಹಿನ್ನಲೆಯಲ್ಲಿ ಪ್ರಕಾಶ್ ರೈ ಜನರ ಬಳಿ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕೇಂದ್ರ ಸರ್ಕಾರದ ನಡೆಗಳನ್ನು ವಿರೋಧಿಸುವ ರೈ, ತಾವು ಮಾಡಿದ್ದು ಸರಿಯೋ ತಪ್ಪೋ ಎಂದು ಲೈಕ್ಸ್, ಡಿಸ್ ಲೈಕ್ಸ್ ಮತ್ತು ಕಾಮೆಂಟ್ ಮೂಲಕ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.ಸಚಿವ ಅನಂತಕುಮಾರ್