ನವದೆಹಲಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಿಂದುತ್ವದ ಬಗ್ಗೆ ನೀಡಿದ ಹೇಳಿಕೆಯೊಂದರ ಬಗ್ಗೆ ನಟ ಪ್ರಕಾಶ್ ರೈ ಕಿಡಿ ಕಾರಿದ್ದಾರೆ. ಅನಂತ ಕುಮಾರ್ ಹೆಗ್ಡೆ ಹಿಂದುತ್ವ ಮತ್ತು ರಾಷ್ಟ್ರೀಯತೆ ಎನ್ನುವುದು ಒಂದೇ ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿರುವ ಪ್ರಕಾಶ್ ರೈ ಹಾಗಿದ್ದರೆ ಹಿಂದೂಯೇತರರ ಬಗ್ಗೆ ನಿಮ್ಮ ಸಿದ್ಧಾಂತವೇನು ಎಂದು ಕಿಡಿ ಕಾರಿದ್ದಾರೆ.ಹಿಂದುತ್ವದ ಬಗ್ಗೆ ಸಚಿವ ಹೆಗ್ಡೆ ಮಾತನಾಡಿರುವ ಭಾಷಣದ ವಿಡಿಯೋ ತುಣುಕು ಅಪ್ ಲೋಡ್ ಮಾಡಿರುವ ನಟ