ಬೆಂಗಳೂರು: ನಾನೇನು ಅಸ್ಪೃಶ್ಯನೇ, ಮೋದಿ ಏನು ದೇವರೇ ಎಂದು ಬಹುಭಾಷಾ ತಾರೆ ಪ್ರಕಾಶ್ ರಯ ತಮ್ಮ ಟೀಕಾಕಾರರ ವಿರುದ್ಧ ಕಿಡಿ ಕಾರಿದ್ದಾರೆ.ನಿನ್ನೆ ಶಿವಮೊಗ್ಗದಲ್ಲಿ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಅಭಿಮಾನಿಗಳು ಪ್ರಕಾಶ್ ರೈ ವಿರುದ್ಧ ಹರಿಹಾಯ್ದಿದ್ದರು.ಇದಕ್ಕೆ ಇಂದು ತಿರುಗೇಟು ನೀಡಿರುವ ಪ್ರಕಾಶ್ ರೈ ಪ್ರಶ್ನಿಸಿದವರಿಗೆ ಉತ್ತರಿಸುವ ಬದಲು, ನಮ್ಮನ್ನೇ ಪ್ರಶ್ನೆ ಮಾಡ್ತಾರೆ. ಕಲಾವಿದರು ಜನಪರ ಕೆಲಸಕ್ಕೆ ಬರಬೇಕು. ನಾನು ಹೇಳಿದ್ದರಲ್ಲಿ ತಪ್ಪೇನಿದೆ?