ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ನಟ ಪ್ರಕಾಶ್ ರಾಜ್ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.ಆದರೆ ನಾಮಪತ್ರ ಸಲ್ಲಿಸುವ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕುವಾಗ ಪ್ರಕಾಶ್ ರಾಜ್ ಮಾಡಿದ ಎಡವಟ್ಟೊಂದು ಟ್ರೋಲಿಗರ ಬಾಯಿಗೆ ಆಹಾರವಾಯಿತು.ನಾಮಪತ್ರ ಸಲ್ಲಿಸುವ ಆಹ್ವಾನ ಪತ್ರಿಕೆಯಲ್ಲಿ 22-3-2019 ಎಂದು ದಿನಾಂಕ ಬರೆಯುವ ಬದಲು 2009 ಎಂದು ಬರೆದು ಎಡವಟ್ಟು ಮಾಡಿಕೊಂಡಿದ್ದರು. ತಪ್ಪು ಗೊತ್ತಾಗುತ್ತಿದ್ದಂತೇ ಸರಿಪಡಿಸಿಕೊಂಡರು. ಆದರೆ ಅಷ್ಟರಲ್ಲಾಗಲೇ ಟ್ರೋಲಿಗರು