ದಾವಣಗೆರೆ: ಕರಾವಳಿ ಎಂದರೆ ರಾಣಿ ಅಬ್ಬಕ್ಕ ನೆನಪಾಗುತ್ತಿದ್ದರು, ಈಗ ಯಾಸಿನ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಮೈಸೂರು ಎಂದರೆ ಮಹಾರಾಜರು ನೆನಪಾಗ್ತಿದ್ದರು. ಆದ್ರೀಗ ಟಿಪ್ಪು ಸಂತತಿಯವರು ತುಂಬಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದಿಂದ ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಪೊಲೀಸ್ ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ. ಪೋಲೀಸ್