ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಕಾಮನ್ಸೆನ್ಸ್ ಇಲ್ಲ. ರಾಜಕೀಯ ಪ್ರಬುದ್ಧತೆಯಂತೂ ಇಲ್ಲವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದ ಪ್ರತಾಪ್ಗೆ ಪಾರ್ಲಿಮೆಂಟರಿ ಭಾಷೆ ಗೊತ್ತಿಲ್ಲ. ನಾವು ಅವರ ಮಟ್ಟಕ್ಕೆ ಹೋಗಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಪ್ರತಾಪ್ಗೆ ಪೊಲಿಟಿಕಲ್ ಕಲ್ಚರ್ ಗೊತ್ತಿಲ್ಲ ಅನ್ನಿಸುತ್ತೆ. ಇದೀಗ ನಡೆದಿರುವ ಘಟನೆಗಳಿಂದ ಅವರಿಗೆ ರಾಜಕೀಯ ಪ್ರಬುದ್ಧತೆಯಿಲ್ಲ ಎನ್ನುವುದು ಬಹಿರಂಗವಾಗಿದೆ ಎಂದು ಟೀಕಿಸಿದರು.