ಪ್ರತಾಪ್ ಸಿಂಹ ಅವರಿಗೆ ಸಿಕ್ಕಿರುವುದು ಜೆಡಿಎಸ್ ಮತಗಳು: ವಿಶ್ವನಾಥ್

ಮೈಸೂರು| guna| Last Modified ಶನಿವಾರ, 17 ಮೇ 2014 (17:08 IST)
ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅವರಿಗೆ ಸಿಕ್ಕಿರುವುದು ಜೆಡಿಎಸ್‌ಗೆ ಸಿಗಬೇಕಿದ್ದ ಮತಗಳು ಎಂದು ಮೈಸೂರಿನಲ್ಲಿ ಎಚ್.ವಿಶ್ವನಾಥ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಸಮಗ್ರ ಬದಲಾವಣೆಯಾಗಬೇಕು.

ಕೆಲವು ಸ್ವಪಕ್ಷೀಯರಿಂದಲೇ ಕಾಂಗ್ರೆಸ್‌ಗೆ ಮೋಸವಾಗಿದೆ. ಮೋಸ ಮಾಡಿದವರನ್ನು ಸುಮ್ಮನೇ ಬಿಡಬಾರದು. ಎಚ್.ಡಿ. ದೇವೇಗೌಡರು ಜೆಡಿಎಸ್ ಗೆಲ್ಲದಿದ್ದರೆ

ಮೈಸೂರಿಗೆ ಬರುವುದಿಲ್ಲ ಎಂದಿದ್ದರು. ಹಾಗಾದರೆ ಇನ್ಮುಂದೆ ಮೈಸೂರಿಗೆ ಬರುವುದಿಲ್ಲವೇ ಎಂದು ಮೈಸೂರಿನಲ್ಲಿ ವಿಶ್ವನಾಥ್ ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲೂ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅವರು ಯಾರು ಎಂದು ಪತ್ತೆ ಹಚ್ಚಿ ದೂರು ನೀಡುತ್ತೇನೆ ಎಂದು ವಿಶ್ವನಾಥ್ ಹೇಳಿದರು.
ಇದರಲ್ಲಿ ಇನ್ನಷ್ಟು ಓದಿ :